Monday, October 27, 2008

ಬಾಳಸಂಗಾತಿಗಾಗಿ..............

ಹುಡುಕಿದೆ ಹೃದಯವಿಂದು
ಒಬ್ಬಳನ್ನು, ಬಾಳಸಂಗಾತಿಗೆಂದು
ನಡೆಯುತಿರುವುದು ಮನಸ್ಸಿನಲ್ಲೊಂದು ಘರ್ಷಣೆ
ಬರುವವಳು ಬಾಳಸಂಗಾತಿ ಆಗಿಯೋ
ಇಲ್ಲ ಬಾಳಸಂಘರ್ಷಣೆಗಾತಿ ಆಗಿಯೋ ಎಂದು

ಕಪ್ಪಗಿರಲಿ, ಬಿಳಿಯಾಗಿರಲಿ
ಮನಸ್ಸು ತಿಳಿಯಾಗಿರಲಿ

ಉದ್ಡವಿರಲಿ, ಸಣ್ಣವಿರಲಿ
ಎಲುಬಿಲ್ಲದ ನಾಲಿಗೆ ಸಡಿಲದಂತಿರಲಿ

ಆಕಾಶದಂತೆ ವಿಶಾಲವಿರುವ ಮನಸ್ಸಿನಲ್ಲಿ
ನಕ್ಷತ್ರದಂತೆ ಭಾವನೆಗಳು ಸದಾ ಮಿನುಗುತಿರಲಿ

ಹೂದೋಟದಂತಿರುವ ಹೃದಯದಲ್ಲಿ
ಮಲ್ಲಿಗೆಯೆಂಬ ಪ್ರೀತಿ ಸದಾ ಕಂಪು ಬೀರುತಿರಲಿ

ಹುಡುಕುತಲಿದೆ ಹೃದಯವಿಂದು
ಇಂಥ ಬಾಳಸಂಗಾತಿಗೆಂದು , ಇಂದು.

----ಅನಿಲ್ ಇಟ್ಟಿಗಿ

No comments: