ಮೂಡಿದ ಕವಿ
ನಿನ್ನ ಇರುವಿಕೆ ಕಡಲಾಗಿ ಭಾವನೆಯು ಅಲೆಯಾಗಿ
ಮನದ ತೀರಕೆ ಬಂದು ಅಪ್ಪುತಿರಲು
ಅಲ್ಲಿ ಬರೆದ ಪ್ರೇಮ ಕಾವ್ಯ ಹೊಸದಾಗಿ ಮೂಡಿ
ನವ್ಯ ಕವಿಯ ಜನ್ಮ ನನದಾಯಿತು
--- ಗಿರೀಶ್
ಒಲವು
ಹುಡುಕಿ ಸಿಗುವುದು ಪ್ರೀತಿ ಅಲ್ಲ
ಹುಡುಕದೆ ದೊರೆತರೆ ಪ್ರೇಮವಲ್ಲ
ಅದು ಹುಟ್ಟುವುದು ,
ಮನದ ಭಾವನೆ ಕಣ್ಣಂಚಿನ ಸನ್ನೆಯಾಗಿ ಹೊರಬರಲು
ಉದ್ಭವಿಸುವುದೇ ಪ್ರೀತಿ
ಕರ್ಮೊಡದ ಅಂಚಿನಿಂದ ಮಳೆ ಹನಿಯಾಗಿ
ನವಿಲಿನ ನರ್ತನದ ಆನಂದವಾಗಿ
ಹೊಮ್ಮುವುದೇ ಪ್ರೀತಿ
ಮನದ ಕಡಲಲ್ಲಿ ಇರುವುದು ಬರಿ ಕನಸು
ಕೆದಕಿದರೆ ದೊರೆವುದು ಬರಿಯ ನೋವು
ಅರಿಯದೇ ಜನ್ಮಿಸುವುದು ...ಅದೇ ಒಲವು
ಹುಡುಕದೆ ದೊರೆತರೆ ಪ್ರೇಮವಲ್ಲ
ಅದು ಹುಟ್ಟುವುದು ,
ಮನದ ಭಾವನೆ ಕಣ್ಣಂಚಿನ ಸನ್ನೆಯಾಗಿ ಹೊರಬರಲು
ಉದ್ಭವಿಸುವುದೇ ಪ್ರೀತಿ
ಕರ್ಮೊಡದ ಅಂಚಿನಿಂದ ಮಳೆ ಹನಿಯಾಗಿ
ನವಿಲಿನ ನರ್ತನದ ಆನಂದವಾಗಿ
ಹೊಮ್ಮುವುದೇ ಪ್ರೀತಿ
ಮನದ ಕಡಲಲ್ಲಿ ಇರುವುದು ಬರಿ ಕನಸು
ಕೆದಕಿದರೆ ದೊರೆವುದು ಬರಿಯ ನೋವು
ಅರಿಯದೇ ಜನ್ಮಿಸುವುದು ...ಅದೇ ಒಲವು
--- ಗಿರೀಶ್

No comments:
Post a Comment