ನನಗೊಬ್ಬಳು
ನನಗೊಬ್ಬಳು ..ಬೇಕು
ನನಗಾಗಿಯೇ ಒಬ್ಬಳು
ಸಂಸ್ಕೃತಿಯ ಸೊಗಡಾಗಿ,
ಚೆಂದದ ಚೆಲುವೆಯಾಗಿ
ಅಪರೂಪದ ಅಂದಗಾತಿ ಬೇಕು
ಕಾಮನಬಿಲ್ಲಿನ ಹುಬ್ಬಿನವಳು
ತಾರೆಯ ಕಣ್ಣಿನವಳು
ನಗುವಿನ ಸಿರಿಯವಳು ಬೇಕು
ನವಿಲು ನಾಚಿಸುವ ನಡುಗೆಯವಳು
ಕವಿ ಕಾವ್ಯವಾಣಿ ಮೂಡಿಸುವಂಥವಳು
ಪ್ರೇಮ ದೇವತೆಯಂಥವಳು ..ಬೇಕು
ಹೃದಯ ಕಾದಿದೆ ನಿನಗಾಗಿ..
ನಿನ್ನ ಆರಾಧನೆಗಾಗಿ
ಬೇಗ ಬಂದು ಸೇರು..ನೀನೆ ಸದಾ ನನ್ನುಸಿರು
--- ಗಿರೀಶ್

No comments:
Post a Comment